3 ನೇ ದಿನದ ಸ್ಪೆಷಲ್ ಹಾಡು ಇದು ದೇವಿ ಆರತಿ ಹಾಡು| ಹಾಡುವುದು ಹೇಗೆ? ನೋಡಿರಿ
Rajeshwari and Songs Rajeshwari and Songs
6.37K subscribers
16,805 views
219

 Published On Oct 5, 2024

ದೇವಿಗೆ ಇಂದು ಆರತಿ ಹಾಡು.
ಪ್ರಸ್ತುತಿ :- ರಾಜೇಶ್ವರಿ ಹೆಬ್ಬಾರ್
🎹:- ಶಾರದಾ ಹೆಬ್ಬಾರ್

3 ನೇ ದಿನದ ಸ್ಪೆಷಲ್ ಹಾಡು ಆರತಿ ಹಾಡು, ಕೇಳಿದ್ರೆ ನೀವೂ ತಲೆದೂಗ್ತೀರಿ ಅಷ್ಟು ತಾಳಕ್ಕೆ ಚೆನ್ನಾಗಿದೆ. ಲಿರಿಕ್ಸ್ ಈ ಕೆಳಗೆ ಕೊಟ್ಟಿರ್ತೇನೆ. ಕಲಿಯಲು ಇಷ್ಟವಾದಲ್ಲಿ ಕಲಿತು ಹಾಡಿ ಹಾಗೇ ತಪ್ಪದೇ ನಮ್ಮ ಈ 👉🏻 ‪@rajeshwarihebbar7658‬ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ 🔔 ಒತ್ತಿ ಹೊಸ ಹೊಸ ಹಾಡುಗಳ ನೋಟಿಫಿಕೇಶನ್ ಪಡೆಯಿರಿ.

ನವರಾತ್ರಿ ಶುಭಾಶಯಗಳು 🥰.

ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ನಾನಿಂದು 5.5 k subscribers ಹೊಂದಿದ್ದೇನೆ. ಇನ್ನೂ ಹೆಚ್ಚು ಹೆಚ್ಚು ಹಾಡುಗಳು ನಮ್ಮಿಂದ ನೀವು ಬಯಸುವಿರಾದಲ್ಲಿ ನಮ್ಮ ಈ ಹೆಜ್ಜೆಗೆ ಪ್ರೋತ್ಸಾಹಿಸಿ, ತಪ್ಪದೇ ನೀವೆಲ್ಲರೂ ಸಬ್ಸ್ಕ್ರೈಬ್ ಆಗಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.
ಧನ್ಯವಾದಗಳು 🙏🏻.

🎹🎹🎹🎹🎹🎹🎹🎹🎹🎹🎹🎹🎹🎹🎹🎹

ದೇವಿ ಆರತಿ ಹಾಡು :-

ಬೆಳಗುವೆನಾರತಿಯಾ ಥಳಥಳ ಹೊಳೆಯುವ ಆರತಿಯಾ |
ನಲಿನಲಿಯುತ ನಾ ಖಳ ಸಂಹಾರಿಣಿ ಶೀಲೆ ಪಾರ್ವತಿಗೇ | ಸುಶೀಲೆ ಪಾರ್ವತಿಗೆ || ಪ ||

ಮಾರಿ ಮುನಿದರೆ ತಾ ಒಲಿದರೆ ತೋರಿ ಕರುಣೆಯ ತಾ |
ಭಾರಿ ವೈಭವದಿಂದ ಮೆರೆಯುವ ಮಾರಿಕಾಂಬಿಕೆಗೆ
ಶಿರಸಿಯ ಮಾರಿಕಾಂಬಿಕೆಗೆ || 1 ||

ಚಲ್ವ ವದನಳಿಗೇ ಪ್ರ-ಫುಲ್ಲ ನಯನಳಿಗೇ |
ಉಲ್ಲಾಸದಿ ನಾ ಬೆಳಗುವೆನೀಗ ಕೊಲ್ಲೂರಂಬಿಕೆಗೆ |
ಶ್ರೀ ಮೂಕಾಂಬಿಕೆಗೆ || 2 ||

ಕರದಲಿ ವೀಣೆಯನು ಧರಿಸಿಯೆ ಸರಿಗಮ ನುಡಿಪಳಿಗೇ |
ವಾರಿಜದಾರತಿ ಬೆಳಗುವೆನೀಗ ಶಾರದಾಂಬಿಕೆಗೆ |
ಶೃಂಗೇರಿ ಶಾರದಾಂಬಿಕೆಗೇ || 3 ||

ಚಿತ್ತಜ ತೇಜಳಿಗೆ ಜಮದಗ್ನಿ ಗೋತ್ರಳಿಗೆ |
ಪುತ್ರ ಭಾರ್ಗವ ನಿಂತ ಸ್ಥಿರಗೊಂಡ ರೇಣುಕಾಂಬಿಕೆಗೆ |
ಗುತ್ತಿಯ ರೇಣುಕಾಂಬಿಕೆಗೆ || 4 ||

ಚಾಮರಾಜದೊರೆಯಿಂದಲೆ ಸೇವೆಗೊಂಡಳಿಗೇ |
ಹೇಮದಾರತಿ ಬೆಳಗುವೆನೀಗ ಚಾಮುಂಡೇಶ್ವರಿಗೆ |
ಮೈಸೂರ ಚಾಮುಂಡೇಶ್ವರಿಗೆ || 5 ||

🎹🎹🎹🎹🎹🎹🎹🎹🎹🎹🎹🎹🎹🎹🎹🎹🎹

#bhaktibhajan #navratrispecial #music #navaratri #devihaadugalu #devihadu #devibhajan #devi #durga #lakshmi #easy #daily #dailyvlog #todayspecial #rajeshwarihebbar

‪@rajeshwarihebbar7658‬

show more

Share/Embed